ಅಂದೊಮ್ಮೆ ‘ಮುತ್ತುಪ್ಪಾಡಿ’ಯಲ್ಲಿ ತಾಳಮದ್ದಲೆ

boluvaru

ಬೊಳುವಾರು 

JUST FOR A CHANGE…?
[SUNDAY TIME PASS]

ಅಂದೊಮ್ಮೆ ’ಮುತ್ತುಪ್ಪಾಡಿ’ಯಲ್ಲಿ ತಾಳಮದ್ದಲೆ. ಮಧ್ಯಾಹ್ನ ಮೂರಕ್ಕೆ ಶುರುವಾಗಬೇಕು. ’ಶೇಣಿ ಗೋಪಾಲ ಕೃಷ್ಣ ಭಟ್ಟರು’ ರಾಮ. ಆದರೆ, ಸೀತೆ’ಯ ಅರ್ಥಧಾರಿ ಕೈಕೊಟ್ಟಿದ್ದರು. ಅನಿರ್ವಾಯವಾಗಿ ಗುಡ್ಡೆ ಶಾಲೆಯ ಹೆಡ್ ಮಾಸ್ಟರ್ ನಾರಾಯಣ ಭಟ್ಟರನ್ನು ’ಸ್ಟೆಪಿನಿ’ ಆಗಿ ಒಪ್ಪಿಸಲಾಗಿತ್ತು. ನಾಲ್ಕಕ್ಕೆ ಗಜಮುಖದವಗೇ…., ಆಯ್ತು. ಬಂಗಾರದ ಜಿಂಕೆಯ ಪ್ರವೇಶವೂ ಅಯಿತು.

ಕತೆಯಲ್ಲಿರುವಂತೆ ಸೀತೆ ತನ್ನ ಡಯಲಾಗ್ ಒಪ್ಪಿಸಿದಳು(ರು).’ಪ್ರಾಣ ಕಾಂತ.. ಜಿಂಕೆ ಬೇಕು’.
ಶ್ರೇಣಿಯವರು ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಹೆಂಡತಿಯ ಕರ್ತವ್ಯಗಳ ಪಟ್ಟಿಗಳನ್ನೆಲ್ಲ ಮುಂದಿಟ್ಟರು.

taala

ಕತೆ ಮುಂದುವರಿಯಬೇಕಲ್ಲ;ಸೀತೆ ತನ್ನ ಬೇಡಿಕೆಯನ್ನು ಎರಡನೆಯ ಬಾರಿ ಮಂಡಿಸಿದಳು(ರು)
ಶ್ರೇಣಿಯವರು ಮತ್ತಿಪ್ಪತ್ತು ನಿಮಿಷಗಳಲ್ಲಿ ಗಂಡನ ಅಧಿಕಾರ ವ್ಯಾಪ್ತಿಯನ್ನೆಲ್ಲ ವಿವರಿಸಿದರು.

ಕತೆಮುಂದುವರಿಯಬೇಕಲ್ಲ; ಸೀತೆ ತನ್ನ ಬೇಡಿಕೆಯನ್ನು ಮೂರನೆಯ ಬಾರಿ ಮಂಡಿಸಿದಳು(ರು)
ಶ್ರೇಣಿಯವವರು ಮತ್ತೊಂದು ಇಪ್ಪತ್ತು ನಿಮಿಷಗಳಲ್ಲಿ ಗಂಡನಿಗೆ ಎದುರಾಡುವ ಹೆಂಡತಿಯರ ಜನ್ಮ ಜಾಲಾಡಿದರು.
…..
…..

ಕತೆ ಮುಂದುವರಿಯಬೇಕಲ್ಲ; ಸೀತೆ ತನ್ನ ಬೇಡಿಕೆಯನ್ನು ಹದಿನೆಂಟನೆಯ ಬಾರಿ ಮಂಡಿಸಿದಳು(ರು).

ಶ್ರೇಣಿಯವರಿಗೆ ತಮ್ಮೆದುರು ಅರ್ಥ ಹೇಳುತ್ತಿರುವ ಬಡಪಾಯಿ ಮಾಸ್ಟರನ್ನು, ಸಾಮಗರೆಂದೇ [ಶ್ರೇಣಿಯವರ ಸರಿ ಸಮಾನ ಅರ್ಥದಾರಿ] ಭಾವಿಸಿದಂತಿತ್ತು. ಮತ್ತೊಂದು ಇಪ್ಪತ್ತು ನಿಮಿಷಗಳ ಕಾಲ…

ಗುಡ್ಡೆ ಶಾಲೆಯ ಹೆಡ್ ಮಾಸ್ಟರ್ ನಾರಾಯಣ ಭಟ್ಟರು ಎರಡೂ ಕೈಮುಗಿದು ಅಳುತ್ತಾ ಹೇಳಿಬಿಟ್ಟರು.
’ ತಪ್ಪಾಯಿತು ಪ್ರಾಣ ಕಾಂತಾ. ನನ್ನನ್ನು ಮನ್ನಿಸು.., ನನಗೆ ಜಿಂಕೆಯ ಸಹವಾಸವೇ ಬೇಡ.

ಶ್ರೇಣಿಯವರ ವಿದ್ವತ್ತಿಗೆ ತಲೆದೂಗುತ್ತಿದ್ದವರಿಗೆಲ್ಲ ವಿದ್ಯುತ್ ಕಂಭವೇ ಬಡಿದಂತಾಗಿತ್ತು!
ಶೇಣಿಯವರಿಗೂ…!
ಕತೆ ಮುಂದುವರಿಯಬೇಕಲ್ಲ..???

‍ಲೇಖಕರು Admin

February 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: