ಪ್ರಸಿದ್ದ ಚಿತ್ರ ಕಲಾವಿದ ಮೋಹನ್ ಸೋನಾ ಅವರು ʻರೇಖಾಚಿತ್ರʼ ನಿಲ್ಲಿಸಿ ಒಂದು ವರ್ಷವಾಯಿತು. ಸೊಗಸಾದ ಚಿತ್ರಗಳ ʻಸೋನಾʼ(ಬಂಗಾರ) ಈಗ ಬರೀ ನೆನಪು. ʻಸುವರ್ಣʼರೇಖೆಯ ಕಲಾವಿದ ಮೋಹನ್ ಅವರನ್ನು ʻಅವಧಿʼ ಮತ್ತೆ ನೆನಪು ಮಾಡಿಕೊಳ್ಳುತ್ತಿದೆ. ʻಮೋಹಕʼ ಚಿತ್ರ ಕಲಾವಿದ ಮೋಹನ್ ಸೋನಾ ಅವರಿಗೆ ʻಚಿನ್ನದ ರೇಖಾಂಜಲಿʼ ಇದು.
ಚಿತ್ರಜಗತ್ತಿನಲ್ಲಿ ವಿಶಿಷ್ಟ ಹೆಸರು ಎಂದರೆ, ಮಂಗಳೂರಿನ ಮೋಹನ್ ಸೋನಾ ಅವರದು. ವಿಟ್ಲದ ಸಿ ಪಿ ಸಿ ಆರ್ ನಲ್ಲಿ ಉದ್ಯೋಗಿಯಾಗಿ,, ನಿವೃತ್ತಿ ನಂತರವೂ ʻಚಿತ್ರಸಂಬಂಧʼದ ನಂಟು ಬಿಟ್ಟುಕೊಡದ ಮಾಂತ್ರಿಕ. ಬರೀ ರೇಖೆಗಳ ಜೊತೆ ಆಟವಾಡಿದ್ದಲ್ಲ ಮೋಹನ್ ಸೋನಾ, ರಂಗಭೂಮಿ, ಸಿನಿಮಾ, ನಿರ್ದೇಶನ..ಹೀಗೆ ತರಹೇವಾರಿ ʻಕ್ರಿಯಾಶೀಲ ಮಾಧ್ಯಮʼಗಳಲ್ಲಿ ʻಕ್ರಿಯೇಟಿವ್ʼ ಆಗಿದ್ದರು.
ಮೋಹನ್ ಸೋನಾ ಅವರು ರಚಿಸಿದ ಚಿತ್ರ ಕಲಾಕೃತಿಗಳು ಖ್ಯಾತಿಯನ್ನು ತಂದುಕೊಟ್ಟಿದ್ದವು. ರೇಖಾಚಿತ್ರಗಳು ಕಲಾಲೋಕದಲ್ಲಿ ಸಂಚಲನ ಉಂಟುಮಾಡಿದ್ದವು. ಬಿಳಿ ಪುಟದಲ್ಲಿ ಕಪ್ಪು ಪೆನ್ಸಿಲ್ನಿಂದ ಗೆರೆ ಎಳೆದರೆ, ಅಲ್ಲೊಂದು ಹುಲಿ ಚಿತ್ರ ಮೂಡಿರುತ್ತದೆ.
ನಟನೆ ಬಗ್ಗೆ ಪ್ರೀತಿಯಿಟ್ಟುಕೊಂಡಿದ್ದ ಮೋಹನ್ ಸೋನಾ, ಚೋಮ, ನಾಳೆ ಯಾರಿಗೂ ಇಲ್ಲ, ತೆರೆಗಳಲ್ಲಿ.. ಅಭಿನಯಿಸಿದ್ದನ್ನು ಕಂಡವರು, ಅದ್ಭುತ ನಟನೆ ಎಂದೇ ಅಂದಿದ್ದುಂಟು.
ʻಬಯಲು ಚಿತ್ರಾಲಯʼ ಎಂಬ ಕಲ್ಪನೆ ಮೋಹನ್ ಸೋನಾ ಅವರಿಗೆ ಹೊಳೆದಿದ್ದಾದರೂ ಹೇಗೆ ಎಂಬ ಸೋಜಿಗ ಅನೇಕರದ್ದು.
ಇಂತಹ ಅಪರೂಪದ ಕಲಾವಿದ ಮೋಹನ್ ಸೋನಾ ಅವರ ಕುರಿತಾಗಿ, ʻಮೋಹನ್ ಸೋನಾ ಸ್ಪೆಷಲ್ʼ ಮೂಲಕ ʻಅವಧಿʼಯು ʻನೆನಪುʼ ಮಾಡಿಕೊಳ್ಳುತ್ತದೆ. ಮೋಹನ್ ಸೋನಾ ಅವರ ಕಲಾಕೃತಿಗಳ ಗ್ಯಾಲರಿ ಇದೆ. ಸಾಕ್ಷ್ಯಚಿತ್ರವೂ ಇಲ್ಲಿದೆ.
ಇದು ʻಸೋನಾʼಯಿಲ್ಲದ ವರುಷಕ್ಕೆ ʻಮೋಹಕʼ ನೆನಹಿನ ಸಂಪುಟ. ಒಪ್ಪಿಸಿಕೊಳ್ಳಿ.
0 ಪ್ರತಿಕ್ರಿಯೆಗಳು