ಕೇಸರಿ ಹರವೂ
ಸಿದ್ದರಾಜ ಕಲ್ಯಾಣಕರ ಸ್ಮರಣೆಯ ಬಗ್ಗೆ ಬರೆಯುವಾಗ ‘ಭೂಮಿಗೀತ’ ಚಿತ್ರದಲ್ಲಿ ನಟಿಸಿದ ಅಂಶ ಪ್ರಸ್ತಾಪವೇ ಆಗಿಲ್ಲ!
ನಾನು ಇಲ್ಲಿ ಖಂಡಿತಾ ಇದು ನನ್ನ ಚಿತ್ರ ಎನ್ನುವ ಕಾರಣಕ್ಕೆ ಇದನ್ನು ಬರೆಯುತ್ತಿಲ್ಲ. ಒಬ್ಬ ನಟ ನಟಿಸಿದ ಪ್ರಮುಖ ಪಾತ್ರವೊಂದನ್ನು ಪ್ರಮುಖ ಪತ್ರಿಕೆಯೊಂದು ಗುರುತಿಸದೇ ಹೋದರೆ ಅದು ಆ ನಟನಿಗೆ ಅವನ ಸಾವಿನಲ್ಲೂ ಮಾಡುವ ಅನ್ಯಾಯ. ಅಲ್ಲದೇ, ಭೂಮಿಗೀತ ಕೂಡ ಯಾವುದೋ ಒಂದು ಚಿತ್ರವಲ್ಲ.

ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿರುವ, ರಾಷ್ಟ್ರ, ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ, ಎಲ್ಲಕ್ಕಿಂತ ಮೇಲಾಗಿ ಅನೇಕರು ಮೆಚ್ಚಿಕೊಂಡಿರುವ ಚಿತ್ರ. ಜೊತೆಗೆ ಎಂಬತ್ತು ವರ್ಷಗಳ ಕನ್ನಡ ಚಿತ್ರರಂಗದ ಚರಿತ್ರೆಯಲ್ಲಿ ನಿರ್ಮಿತವಾದ ಎಂಬತ್ತು ಉತ್ತಮ ಚಿತ್ರಗಳಲ್ಲಿ ಒಂದು ಎಂದು ಮೂರೂ ಸಮೀಕ್ಷೆಗಳಲ್ಲಿ ಗುರುತಿಸಿಕೊಂಡಿರುವ ಚಿತ್ರ. ಮತ್ತು ಚಿತ್ರ ನೋಡಿದವರೆಲ್ಲರ ಗಮನಸೆಳೆದ ಪಾತ್ರ ಅದು. ಸಿದ್ದರಾಜ ನಟಿಸಿದ ಮೊದಲ ಚಿತ್ರದ ಬಗ್ಗೆಯೂ ತಪ್ಪು ಮಾಹಿತಿ ಇದೆ ಲೇಖನದಲ್ಲಿ.
ಈ ವಿಚಾರವನ್ನು ಬೇರಾರೂ ಬರೆಯಲಾರರು ಎನ್ನುವ ಕಾರಣಕ್ಕೆ ನಾನೇ ಬರೆಯಬೇಕಾಗಿ ಬಂದಿರುವುದು ನನಗೆ ಮುಜುಗರದ ಸಂಗತಿ.
ಇಲ್ಲಿ ಸ್ಮರಣೆಯನ್ನು ಬರೆದ ಲೇಖಕವನ್ನು ಬೊಟ್ಟುಮಾಡಬೇಕೋ ಅಥವಾ ಪತ್ರಿಕೆಯನ್ನು ಬೊಟ್ಟುಮಾಡಬೇಕೋ ತಿಳಿಯದು. ನಮ್ಮ ಒಟ್ಟೂ ಪತ್ರಿಕೋದ್ಯಮದ ಕಾರ್ಯನೀತಿಯೇ ಬದಲಾಗಿರುವ ಈ ಕಾಲ-ದೇಶದಲ್ಲಿ ಇವೆಲ್ಲಾ ನಡೆಯುವುದು ಆಶ್ಚರ್ಯವೂ ಅಲ್ಲ ಎಂದು ಅನಿಸುತ್ತಿದೆ.
0 ಪ್ರತಿಕ್ರಿಯೆಗಳು